ಕಲಬುರಗಿ: ದೇಶದ ಖ್ಯಾತ ಉದ್ಯಮಿ, ಪದ್ಮವಿಭೂಷಣ ರತನ್ ಟಾಟಾ ಅವರ ನಿಧನರಾಗಿದ್ದರಿಂದ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ಬಳಿ ನೂರಾರು ಯುವಕರು ಸೇರಿಕೊಂಡು ಕ್ಯಾಂಡಲ್ ಮಾರ್ಚ್ ಮೂಲಕ ಅಂತಿಮ ನಮನ ಸಲ್ಲಿಸಿದರು.
ಅಧಿಕ ಸಂಖ್ಯೆಯಲ್ಲಿ ಯುವಕರು ಸೇರಿದಂತೆ ನೂರಾರು ಅಭಿಮಾನಿಗಳು ದಿ.ಡಾ.ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ರತನ್ ಟಾಟಾ ಅವರ ಅಗಲಿಕೆ ಕಲಬುರಗಿಯಲ್ಲಿ ಜನರು ಮಮ್ಮಲು ಮರುಗಿದ್ದಾರೆ. ಟಾಟಾ ಅವರು ಸಾಕಷ್ಟು ಬಡವರಿಗೆ, ನಿರ್ಗತಿಕರಿಗೆ, ಸುರಿಲ್ಲದವರಿಗೆ ಅನ್ನ, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇರಿ ಅನೇಕ ಸಾಮಾಜಿಕ ಕಾರ್ಯ ಮಾಡುವ ಮೂಲಕ ತಮ್ಮನ್ನು ತಾವು ದೇಶಕ್ಕಾಗಿ ಅರ್ಪಿಸಿಕೊಂಡಿದ್ದರು. ಅವರ ಅಗಲಿಕೆ ಅತೀವ ನೋವು ಉಂಟು ಮಾಡಿದೆ ಎಂದು ಅಭಿಮಾನಿಗಳು ನೋವು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೃಥ್ವಿಕುಮಾರ್ ಉತ್ನಾಳಕರ್, ಗುಂಡು ಪಾಟೀಲ್, ಸೂರಿ ಪಾಟೀಲ್ ಮಂದೇವಾಲ್, ಸಚಿನ್ ಎಳಮನಿ, ಅಮಿತ್ ಸಾಲಿಮಠ, ವಿನೋದ್ ಬಿರಾದಾರ್, ದರ್ಶನ್ ವಂಟಿ, ಶ್ರೀಕಾಂತ್ ಗೊಬ್ಬುರಕರ್, ಅಭಿಷೇಕ್ ಗೊಬ್ಬುರ್, ದೇವರಾಜ್ ಬಿರಾದಾರ್, ಮೌನೇಶ್ ಸೇರಿ ಅನೇಕರು ಭಾಗವಹಿಸಿದ್ದರು.