2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶ ಘೋಷಣೆ ಮಾಡಿದ್ದು, ಶೇ.81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ karresults.nic.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ತಿಳಿಸಿದೆ.
PUC ಫಲಿತಾಂಶ: ರಾಜ್ಯಕ್ಕೆ ಇವರೇ ಫಸ್ಟ್ ದ್ವಿತೀಯ!
ಮಾ.1ರಿಂದ ಮಾ.22ರವರೆಗೆ ನಡೆದಿದ್ದ ಪರೀಕ್ಷೆಗೆ 6.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಇನ್ನು ನಿಮ್ಮ ಫಲಿತಾಂಶ ವೀಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.
PUC ಫಲಿತಾಂಶ: ಈ ಜಿಲ್ಲೆ ಪ್ರಥಮ
∆ ದಕ್ಷಿಣ ಕನ್ನಡ: ಪ್ರಥಮ ಸ್ಥಾನ (ಶೇ.97)
∆ ಉಡುಪಿ: 2ನೇ ಸ್ಥಾನ (96)
∆ ವಿಜಯಪುರ: 3ನೇ ಸ್ಥಾನ (94)
∆ ಉತ್ತರ ಕನ್ನಡ: 4ನೇ ಸ್ಥಾನ (92)
∆ ಕೊಡಗು: 5ನೇ ಸ್ಥಾನ (92)
∆ ಬೆಂಗಳೂರು ದಕ್ಷಿಣ: 6ನೇ ಸ್ಥಾನ (89)
∆ ಹಾಸನ: 7ನೇ ಸ್ಥಾನ (85)
∆ ಚಾಮರಾಜನಗರ: 8ನೇ ಸ್ಥಾನ (84)
∆ ಗದಗ ಜಿಲ್ಲೆ: ಕೊನೆ ಸ್ಥಾನ