ಗ್ಯಾಸ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್ ಬೆಲೆ ₹30.50 ಇಳಿಕೆಯಾಗಿದೆ. ಈ ಮೂಲಕ ಹೊಸ ಹಣಕಾಸು ವರ್ಷದ ಮೊದಲ ದಿನವೇ ಎಲ್ಪಿಜಿ (LPG) ಬಳಕೆದಾರರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.
ಇನ್ನು 5ಕೆಜಿ FTL (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್ ಬೆಲೆ ₹7.50 ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದು (ಏಪ್ರಿಲ್ 01) ರಿಂದಲೇ ಅನ್ವಯವಾಗಲಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹1,830, ದೆಹಲಿಯಲ್ಲಿ₹1764.50, ಮುಂಬೈನಲ್ಲಿ ₹1717.50, ಕೋಲ್ಕತ್ತಾದಲ್ಲಿ ₹1879 ಮತ್ತು ಚೆನ್ನೈನಲ್ಲಿ ₹1930 ಸಿಲಿಂಡರ್ ಸಿಗಲಿದೆ.
ತನ್ನ ಮಗಳಿಗೆ ಮದ್ವೆಯಾದ್ರೆ, ಬ್ಲ್ಯಾಂಕ್ ಚೆಕ್ ನೀಡುವೆ ಎಂದ ಅಪ್ಪ.. ಬಿಗ್ ಆಫರ್!
ಗೃಹ ಬಳಕೆಯ LPG ಸಿಲಿಂಡರ್ ಬೆಲೆ?
ಗೃಹ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕಳೆದ ಬಾರಿ ಕೇಂದ್ರ ಸರ್ಕಾರ ಮಹಿಳಾ ದಿನದಂದು ₹100 ಕಡಿಮೆ ಮಾಡಿ ಸ್ತ್ರೀಯರಿಗೆ ಉಡುಗೊರೆ ನೀಡಿತ್ತು.
ವಾಣಿಜ್ಯ ಬಳಕೆಯ ಸಿಲಿಂಡರ್ ಬಳಕೆಯು ಕಳೆದ ಮಾರ್ಚ್ ನಲ್ಲಿ ₹25 ಹೆಚ್ಚಳ ಮಾಡಲಾಗಿತ್ತು. ಇದೀಗ ಇಂದಿನಿಂದ ಇಳಿಕೆಯಾಗಲಿದೆ.