& ಸಮಾಜವಾದಿ ಪಕ್ಷದ ಹಿರಿಯ ನಾಯಕ, ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಸಂಸದ ಶಫೀಕರ್ ರಹಮಾನ್ ಬಾರ್ಕ್ (94) ಅವರು ಇಂದು ನಿಧನರಾಗಿದ್ದಾರೆ. ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದ ಅವರು ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧವಶರಾಗಿದ್ದಾರೆ.
ಜುಲೈ 11, 1930ರಂದು ಜನಿಸಿದ ಬಾರ್ಕ್, 5 ಬಾರಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮುರಾದಾಬಾದ್ ಲೋಕಸಭಾ ಕ್ಷೇತ್ರದಿಂದ 3 ಬಾರಿ (1996, 1998, 2004) ಮತ್ತು ಸಂಭಾಲ್ ಲೋಕಸಭಾ ಕ್ಷೇತ್ರದಿಂದ 2 ಬಾರಿ (2009, 2019) ಗೆಲುವು ಸಾಧಿಸಿದ್ದಾರೆ.
ಟ್ರಕ್‌ಗೆ ಜೀಪ್ ಡಿಕ್ಕಿ: 6 ಮಂದಿ ಸಾವು!
ಈ ಬಗ್ಗೆ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷ, ಹಲವು ಬಾರಿ ಸಂಸದರಾಗಿ ಆಯ್ಕೆಯಾದ ಶಫಿಕುರ್ ಸಾಹೇಬರ ನಿಧನ ತುಂಬಾ ದುಃಖಕರವಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದೆ.
ಇವರ ನಿಧನಕ್ಕೆ ದೇಶದ ಮಹಾನ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.