ಪ್ಯಾರಿಸ್: ಫ್ರಾನ್ಸ್ ದೇಶದ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅತ್ತಲ್ ನೇಮಕವಾಗಿದ್ದಾರೆ. ಈ ಬಗ್ಗೆ ಹಿಂದಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಕಚೇರಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ವಕ್ತಾರ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿರುವ 34 ವರ್ಷದ ಗೇಬ್ರಿಯಲ್, ಫ್ರಾನ್ಸ್‌ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದಾರೆ. ಅಲ್ಲದೆ, ಅವರು ಫ್ರಾನ್ಸ್‌ನ ಮೊದಲ ಸಲಿಂಗಿ ಪ್ರಧಾನಿಯೂ ಆಗಿದ್ದಾರೆ.
46 ವರ್ಷ ವಯಸ್ಸಿನ ಮ್ಯಾಕ್ರನ್, 2017ರಲ್ಲಿ ಫ್ರಾನ್ಸ್ ದೇಶದ ಅಧ್ಯಕ್ಷರಾದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎನಿಸಿದ್ದರು.