ಕಲಬುರಗಿ: ಕಬ್ಬಿನ ಲಾರಿ, ಟೆಂಪೋ ಮತ್ತು ಬೈಕ್ ನಡುವೆ ನಡುವೆ ಸಂಭವಿಸಿದ ಭೇಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಅಫಜಲಪುರ ಮುಖ್ಯ ರಸ್ತೆಯ ಗೊಬ್ಬುರ (ಬಿ) ಬಳಿ ನಡೆದಿದೆ.
ಕಲಬುರಗಿ ನಗರದ ನಿವಾಸಿಗಳಾದ ವಿನೋದ್ ರವಿರಾವ್ (54), ಅನುಪ್ ಮಾಧವ್ ಬೆಂಗೇರಿ(29) ಮತ್ತು ಗೊಬ್ಬರ್ ಬಿ ಗ್ರಾಮದ ನಿವಾಸಿ ಬೈಕ್ ಸವಾರ ಬಸವರಾಜ್ ಚಿಸ್ತಿ ಎಂಬಾತರೆ ಮೃತಪಟ್ಟರೆಂದು ಗುರುತಿಸಲಾಗಿದೆ.
ಟೆಂಪೊದಲ್ಲಿದ್ದ ಮೃತರಿಬ್ಬರು ಸೇರಿದಂತೆ ಒಟ್ಟು 8 ಮಂದಿ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ದರ್ಶನ ಪಡೆದು ಕಲಬುರಗಿ ಯತ್ತ ತೆರಳುತ್ತಿದ್ದರು. ಈ ವೇಳೆಯೇ ಲಾರಿ, ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಸ್.ಪಿ ಅಡ್ಡೂರು ಶ್ರೀನಿವಾಸಲು ಮತ್ತು ಡಿಎಸ್ಪಿ ಗೊಪಿ ಬಿ.ಆರ್, ಸಿಪಿಐ ಪ್ರಕಾಶ್ ಯಾತನೂರ್, ಸಿಬ್ಬಂದಿ ಸಂಗಣ್ಣ ಸೇರಿದಂತೆ ಗಣಗಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತಾಗಿ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.