ಕಲಬುರಗಿ: ನಗರದ ಮಕ್ಕಂಪುರ ಬಡಾವಣೆ ನಿವಾಸಿ, ಮದರ್ ತೆರೇಸಾ ಶಾಲೆಯ ಆಡಳಿತ ಮಂಡಳಿ ಸದಸ್ಯೆ ಶಕುಂತಲಾ ಭೀಮಳ್ಳಿ (77) ಶುಕ್ರವಾರ ನಿಧನರಾದರು.
ಅವರಿಗೆ ಪತಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಎಚ್‌ಕೆಇ ಸಂಸ್ಥೆಯ ಹಾಲಿ ಉಪಾಧ್ಯಕ್ಷ ರಾಜಾ ಭೀಮಳ್ಳಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.
ಬಸವ ಸಮಿತಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಶಕುಂತಲಾ ಭೀಮಳ್ಳಿ ಅವರು ಇತ್ತೀಚೆಗೆ ನಡೆದ ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆಯು ನಗರದ ಹುಮನಾಬಾದ್ ರಸ್ತೆಯ ಗಂಜ್ ಪ್ರದೇಶದ ಅವರ ದಾಲ್ ಮಿಲ್ ಆವರಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಗೌರವಾರ್ಥ ಅವರು ಆಡಳಿತ ಮಂಡಳಿ ಸದಸ್ಯರಾಗಿರುವ ಕಲಬುರಗಿಯ ಮದರ್ ತೆರೆಸಾ ಶಾಲೆಗೆ ಶನಿವಾರ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.