ಬೆಂಗಳೂರಿನ ಎನ್.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2 ರನ್ ಗಳಿಂದ ರೋಚಕ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ ಪಡೆ, 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 2 ರನ್ ಗಳಿಂದ ಯುಪಿ ವಾರಿಯರ್ಸ್, RCB ಎದುರು ಸೋಲು ಅನುಭವಿಸಿತು.
ಆರ್ ಸಿಬಿ ಪರ ಬ್ಯಾಟಿಂಗ್ ನಲ್ಲಿ ರೀಚಾ ಘೋಷ್-62, ಮೇಘನಾ-53 ರನ್ ಗಳಿಸಿದರು. ಇತ್ತ ಯುಪಿ ಪರ ಗಾಯಕ್ವಾಡ್-2 ವಿಕೆಟ್ ಕಿತ್ತಿದರೆ, ಹ್ಯಾರಿಸ್, ತಾಹ್ಲಿಯಾ, ಎಕ್ಸೆಸ್ಟೋನ್ & ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.
ಯುಪಿ ವಾರಿಯರ್ಸ್ ಪರ ಹ್ಯಾರಿಸ್-38, ಶ್ವೇತಾ-31 ರನ್ ಗಳಿಸಿದರು. ಇತ್ತ ಆರ್ ಸಿಬಿ ಬೌಲರ್ ಗಳಾದ ಶೋಭನಾ ಆಶಾ-5, ಸೋಫಿಯಾ & ವಾರೆಹಾಮ್ ತಲಾ 1 ವಿಕೆಟ್ ಪಡೆದರು.