ಶರಣ ಸಾಹಿತ್ಯ ಸಾಮಾನ್ಯ ವ್ಯಕ್ತಿಯಲ್ಲೂ ಸಂಸ್ಕೃತಿ ಬೀಜ ಬಿತ್ತಿದೆ: ಡಾ. ಸಿ. ಸೋಮಶೇಖರ್

Date:

Share post:

ಕಲಬುರಗಿ: ನಾಡಿನ ಸಾಮಾನ್ಯ ವ್ಯಕ್ತಿಯಲ್ಲೂ ಸಂಸ್ಕೃತಿಯ ಬೀಜ ಬಿತ್ತಿದ್ದು ಶರಣ ಸಾಹಿತ್ಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಅಭಿಮತ ವ್ಯಕ್ತಪಡಿಸಿದರು.

 

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾ ಭವನದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆ, ನೂತನ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವಿ ಮೌಲ್ಯಗಳನ್ನು ಹೊಂದಿರುವ ಶರಣ ಸಾಹಿತ್ಯ ವಿಶ್ವದ ಸಾಹಿತ್ಯವಾಗಿದ್ದು, ಶರಣ ಧರ್ಮ ವಿಕಾಸನಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯಬೇಕು. ಹೀಗಾಗಿ ಶರಣ ಸಾಹಿತ್ಯದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

 

ಪೀಠ ಹಾಗೂ ಪೇಟಾ ಯಾವುದು ಶಾಶ್ವತವಲ್ಲ. ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಶ್ರದ್ದೆ ಹಾಗೂ ಪ್ರೀತಿ ಕೆಲಸ ಮಾಡಬೇಕು. ಅಧಿಕಾರ, ಹಣ, ಯವ್ವನ ಹಾಗೂ ಶಕ್ತಿ ಇದ್ದಾಗ ಸಮಾಜ ಸೇವೆ ಮಾಡುವ ಮನಸ್ಥಿತಿ ಎಲ್ಲರೂ ರೂಢಿಸಬೇಕು ಎಂದು ಸಲಹೆ ನೀಡಿದರು.

 

ಪ್ರಾಸ್ತವಿಕವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ ನಿಕಟ ಪೂರ್ವ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ, ಬಸವಾದಿ ಶರಣರ ಸೇವೆ ಮಾಡುವ ಉದ್ದೇಶ ಮಾಡುವ ಯಾರೇ ಆದರೂ ಶರಣ ಸಾಹಿತ್ಯ ಪರಿಷತ್ತಿಗೆ ಬರಬಹುದು. ಸೇವಾ ಮನೋಭಾವ ಎಲ್ಲರಲ್ಲೂ ಇರುವುದು ಅವಶ್ಯಕವಾಗಿದೆ ಎಂದು ಹೇಳಿದರು.

 

ಶರಣ ಸಾಹಿತ್ಯ ಪರಿಷತ್ತನಲ್ಲಿ ಹಲವು ಹುದ್ದೆಗಳನ್ನು ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಬಯಸದೆ ಹುದ್ದೆಗಳನ್ನು ನೀಡಿದ್ದ ಶರಣ ಸಾಹಿತ್ಯ ಪರಿಷತ್ತಿಗೆ ನಾನು ಚಿರಋಣಿಯಾಗಿದ್ದೇನೆ. ಅಧ್ಯಕ್ಷನಾಗಿ ನಿವೃತ್ತಿಯಾದ ಬಳಿಕ ಸದಸ್ಯನಾಗಿ ನನ್ನ ಸೇವೆ ಮುಂದುವರೆಸಿಕೊಂಡು ಹೋಗುವೆ. ಡಾ.ಸಿ. ಸೋಮಶೇಖರ್ ಅವರು ಶರಣ ಸಾಹಿತ್ಯ ಪರಿಷತ್ತು ಎತ್ತರಕ್ಕೆ ಕೊಂಡೋಯಲ್ಲಿ ಎಂದು ಹಾರೈಸಿದರು.

 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಡಾ. ಶಾಂತಾ ಅಷ್ಟಗಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ ಜಿಲ್ಲಾ ಗೌರವ ಅಧ್ಯಕ್ಷ ಕುಪೇಂದ್ರ ಪಾಟೀಲ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಂಜನ್ ಸಂತ್ಯಂಪೇಟ್, ರವೀಂದ್ರ ಶಹಾಬಾದಿ, ವಿನೋದಕುಮಾರ್ ಜನೆವರಿ, ನೀಲಾಂಬಿಕ ಶೇರಿಕಾರ್, ಬಸವರಾಜ್ ಚಾಂದಕವಟೆ, ಪ್ರೊ. ಶೋಭಾ ದೇವಿ ಚೆಕ್ಕಿ, ಎಸ್. ಕೆ ಬಿರಾದಾರ್ ಇದ್ದರು.

 

ವಿಶ್ವನಾಥ್ ಮಂಗಲಗಿ ಶರಣ ಗೀತೆ ಹಾಡಿದರು, ಸಂತೋಷ್ ಹೂಗಾರ್ ಸ್ವಾಗತಿಸಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಸಾವು!

ಕಲಬುರಗಿ: ಕಾರು ಮತ್ತು ಲಾರಿಯ ಮಧ್ಯೆ ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ಭೀಕರ...

ರಾಜ್ಯದ ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ 

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್....

ಕಲಬುರಗಿಯ ಕಮಲಾಪುರದಲ್ಲಿ ಭೀಕರ ಅಪಘಾತ; ನಾಲ್ವರ ಸಾವು!

ಕಲಬುರಗಿ: ಮಹಿಂದ್ರಾ ಪಿಕಪ್ ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ...

ಶಕುಂತಲಾ ಬಸವರಾಜ ಭೀಮಳ್ಳಿ ಇನ್ನಿಲ್ಲ, ಶಾಲೆಗೆ ರಜೆ ಘೋಷಣೆ

ಕಲಬುರಗಿ: ನಗರದ ಮಕ್ಕಂಪುರ ಬಡಾವಣೆ ನಿವಾಸಿ, ಮದರ್ ತೆರೇಸಾ ಶಾಲೆಯ ಆಡಳಿತ...