‘ದೂರದರ್ಶನ’ದಲ್ಲಿ ಪ್ರಸಾರವಾದ ಪ್ರಸಿದ್ಧ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿರುವ ನಟನಿಗೆ ಈ ಸಲದ ಬಿಜೆಪಿ ಪಕ್ಷದಿಂದ ಟಿಕೆಟ್ ಘೋಷಿಸಲಾಗಿದೆ.
ಶ್ರೀರಾಮನ ಪಾತ್ರಧಾರಿಯಲ್ಲಿ ಮಿಂಚಿದ ನಟ ಅರುಣ್ ಗೋವಿಲ್ ಅವರನ್ನು ಮೊದಲ ಬಾರಿಗೆ ಕಣಕ್ಕೆ ಇಳಿದಿರುವ ಬಿಜೆಪಿ, ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿದೆ.
ಇಂದು ಬಿಜೆಪಿ ಬಿಡುಗಡೆಗೊಳಿಸಿದ 5ನೇ ಪಟ್ಟಿಯಲ್ಲಿ ಒಟ್ಟು 111 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು. ಅದರಲ್ಲಿ ನಟಿ ಕಂಗನಾ ರಣಾವತ್ ಸೇರಿ ಹಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಸಲ ಅವಕಾಶ ನೀಡಿದೆ.
ನಟ ಅರುಣ್ ಗೋವಿಲ್ ಸೇರಿದಂತೆ ರಾಮಾಯಣ ಧಾರಾವಾಹಿಯಲ್ಲಿ ನಟಿಸಿರುವ ಇತರ ನಟರು ಇತ್ತೀಚೆಗೆ ರಾಮಮಂದಿರದ ಉದ್ಘಾಟನೆಯ ವೇಳೆ ಹಾಜರಿದ್ದರು.
ಕಳೆದ ಕೋವಿಡ್ ಭೀತಿಯಲ್ಲಿ ಈ ಧಾರಾವಾಹಿ ಮರುಪ್ರಸಾರವಾಗಿ ಟಿಆರ್ ಪಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿತ್ತು.