ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಯ ನೋಂದಣಿಗೂ ಡಿ.26ರಿಂದ ಚಾಲನೆ ನೀಡಲಾಗುತ್ತಿದೆ. ಪದವೀಧರರಿಗೆ ₹3,000 & ಡಿಪ್ಲೊಮಾದವರಿಗೆ ₹1,500 ನೀಡುವ ಈ ಯೋಜನೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ (E-KYC ಕಡ್ಡಾಯ), ಪದವಿ/ಡಿಪ್ಲೊಮಾ ಅಂಕಪಟ್ಟಿ (2023ರಲ್ಲಿ ಮುಗಿಸಿರಬೇಕು), 6 ತಿಂಗಳಾದರೂ ಉದ್ಯೋಗ ಸಿಗದವರು ಅರ್ಹರು.