ಪಿಎಂ ಆವಾಸ್ ಯೋಜನೆಯ 1150 ಮನೆಗಳ ಅಕ್ರಮ ಹಣ ಲೂಟಿ: ಈರಣ್ಣಗೌಡ ಪಾಟೀಲ್

Date:

Share post:

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಪಟ್ಟಣದ ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2019-20ರಲ್ಲಿ 400 ಮನೆ, 2021-22ರಲ್ಲಿ 750 ಮನೆಗಳು ಸೇರಿದಂತೆ ಒಟ್ಟು 1150 ಮನೆಗಳು ಮಂಜೂರಾಗಿದ್ದು, ಇದರಲ್ಲಿ ಒಂದೇ ಒಂದು ಮನೆ ಕಟ್ಟದೇ ಸಂಪೂರ್ಣ ಹಣ ಲೂಟಿ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಈರಣ್ಣಗೌಡ ಪಾಟೀಲ್ ಗುಳ್ಯಾಳ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೇವರ್ಗಿಯ ಸ್ಥಳೀಯ ಶಾಸಕರು, ಸ್ಲಂ ಬೋರ್ಡ್ ಅಧಿಕಾರಿಗಳು, ಇಇ, ಎಇಇ, ಜೆಇ ಹಾಗೂ ಗುತ್ತಿಗೆದಾರರು ಸೇರಿಕೊಂಡು ಸುಮಾರು ಅಂದಾಜು ೭೫ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಝಮೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರು ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ಅಥವಾ ಸಿಐಡಿಗೆ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ನಾವು ಈಗಾಗಲೇ ಸ್ಲಂ ಬೋರ್ಡ್ ಇಇ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದೇವೆ. ಆದರೂ ಕೂಡಾ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ದಾಖಲೆ ನೀಡಿಲ್ಲ. ಇವೆಲ್ಲವೂ ನೋಡಿದಾಗ ಶಾಸಕರು ಹಾಗೂ ಗುತ್ತಿಗೆದಾರರು ಸೇರಿಕೊಂಡು ಇಷ್ಟೊಂದು ದೊಡ್ಡ ಹಗರಣ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಅನುಮಾನಗಳು ಕಾಡುತ್ತಿದ್ದು, ಈಗಾಗಲೇ ಇದರ ಕುರಿತು ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದೇವೆ.  ದೂರು ನೀಡಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಗಳನ್ನು ಕಟ್ಟಿಸದೇ ಹಣ ಲೂಟಿ ಹೊಡೆದಿರುವ ಕುರಿತು ತನಿಖೆ ನಡೆಸುವಂತೆ ಒಂದು ವಾರದ ಗಡುವು ನೀಡುತ್ತೇವೆ. ಸೂಕ್ತ ತನಿಖೆ ನಡೆಸದೇ ಹೋದಲ್ಲಿ ಪಟ್ಟಣದ ಬಸವೇಶ್ವರ ಸರ್ಕಲ್,ನಲ್ಲಿ ಕನ್ನಡ ಪರ,ರೈತ ಪರ ಹಾಗೂ ಪ್ರಗತಿಪರ ಹೋರಾಟಗಾರರ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣ ಜೇವರ್ಗಿ, ಸಾಯಬಣ್ಣಾ ಜೇವರ್ಗಿ, ಶಂಕರ ಹೊನ್ನಾಳ್ಳಿ, ಪರಮೇಶ್ವರ್ ಬಿರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಸಾವು!

ಕಲಬುರಗಿ: ಕಾರು ಮತ್ತು ಲಾರಿಯ ಮಧ್ಯೆ ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ಭೀಕರ...

ರಾಜ್ಯದ ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ 

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್....

ಕಲಬುರಗಿಯ ಕಮಲಾಪುರದಲ್ಲಿ ಭೀಕರ ಅಪಘಾತ; ನಾಲ್ವರ ಸಾವು!

ಕಲಬುರಗಿ: ಮಹಿಂದ್ರಾ ಪಿಕಪ್ ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ...

ಶಕುಂತಲಾ ಬಸವರಾಜ ಭೀಮಳ್ಳಿ ಇನ್ನಿಲ್ಲ, ಶಾಲೆಗೆ ರಜೆ ಘೋಷಣೆ

ಕಲಬುರಗಿ: ನಗರದ ಮಕ್ಕಂಪುರ ಬಡಾವಣೆ ನಿವಾಸಿ, ಮದರ್ ತೆರೇಸಾ ಶಾಲೆಯ ಆಡಳಿತ...