ನೀನು ಕ್ಷಮಯಾಧರಿತ್ರಿ ಅಲ್ಲವೆ…!
ಪ್ರಕೃತಿಯ ಮೂಲ ಜನನಿಯೇ ಈ ಪುರುಷ ಸಂತಾನವನ್ನ ಈನೀನು ಕ್ಷಮಯಾಧರಿತ್ರಿ ಅಲ್ಲವೆ…ಗಲೂ ಕ್ಷಮಿಸುತ್ತಿ ಯಾಕಂದ್ರೆ ನೀನು ಕ್ಷಮಯಾಧರಿತ್ರಿಯಲ್ಲವೆ…
ಹೆಣ್ಣೆಂದೂ ಜರಿದು ಅವಮಾನಿಸಿದಾಗಲೂ ಕ್ಷಮಿಸುತ್ತಿ ,
ಉತ್ತರಕುಮಾರರ ಮಹಾಪೌರುಷದ ಕಿಡಿ ನಿನ್ನ ಮೇಲೆ ಬಿದ್ದಾಗಲೂ ಸಹಿಸುತ್ತಿ ,
ಯಾಕಂದ್ರೆ ನೀನು ಕ್ಷಮಯಾಧರಿತ್ರಿ ಅಲ್ಲವೆ..
ಗಂಡಿನಿಂದ ಅತ್ಯಾಚಾರ , ಅಪಮಾನಕ್ಕೊಳಗಾದಾಗಲೂ ಭೂಮಿ ತೂಕದ ಸಹನೆ ತೋರಿ ಅಂತರಜ್ವಾಲೆಯಾಗಿರುವಿ.
ಯಾಕೆಂದರೆ ನೀನು ಕ್ಷಮಯಾಧರಿತ್ರಿ ಅಲ್ಲವೆ..?
ಕ್ಷಮಯಾಧರಿತ್ರಿಯೇ… ಯಾವತ್ತೂ ಇಲ್ಲದ ಗೌರವ , ಮನ್ನಣೆ ಇಂದು ನಿನ್ನ ದಿನದಂದು ತೋರುತ್ತಿರುವ ಗಂಡಿನ ಅಪಕ್ವ ಬೌದ್ಧಿಕತೆಯನ್ನೂ ಕ್ಷಮಿಸು.
> ಲಕ್ಷ್ಮೀಕಾಂತ ಜೋಶಿ