ಸೋಷಿಯಲ್ ಮೀಡಿಯಾಗಳಲ್ಲಿ ದಿನನಿತ್ಯವೂ ಸಾಕಷ್ಟು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ವರನಿಗೆ ಬಿಗ್ ಆಫರ್ ನೀಡಲಾಗಿದೆ.
‘ತನ್ನ ಮಗಳನ್ನು ಒಂದು ವಾರದೊಳಗೆ ಮದುವೆಯಾಗಲು ಮುಂದೆ ಬರುವ ವರನಿಗೆ ಬ್ಲ್ಯಾಂಕ್ ಚೆಕ್ ನೀಡುವೆ’ ಎಂದು ವ್ಯಕ್ತಿಯೊಬ್ಬ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ತಂದೆ ತನ್ನ ಮಗಳೊಂದಿಗೆ ಥಾರ್ ಜೀಪ್ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದಾನೆ. ಆದರೆ ಈ ವಿಡಿಯೋ ನಕಲಿಯೋ ಅಸಲಿಯೋ ಈವರೆಗೂ ತಿಳಿದುಬಂದಿಲ್ಲ.
ತಂದೆಯ ಒಂದು ಕೈಯಲ್ಲಿ ಚೆಕ್ ಬುಕ್ ಇದೆ. “ನನ್ನ ಮಗಳನ್ನು ಮದುವೆಯಾಗಲು ವರ ಬೇಕಾಗಿದ್ದಾನೆ. ಒಂದೇ ವಾರದೊಳಗಾಗಿ ನನ್ನ ಮಗಳನ್ನು ಮದುವೆಯಾಗಬೇಕು ಎಂದಿದ್ದಾನೆ. ಅದರ ಪ್ರಯಾರ್ಥವಾಗಿ ಆತನಿಗೆ ಬ್ಲ್ಯಾಂಕ್ ಚೆಕ್ ನೀಡುವೆ, ಎಷ್ಟಾದರೂ ಹಣ ಬರೆದುಕೊಳ್ಳಬಹುದು ಎಂದು ಹೇಳಿದ್ದಾನೆ.
@shadi_karne_wali_girls ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾ.18ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಗೆ ಲಕ್ಷಾಂತರ ವೀವ್ಸ್ ಕೂಡ ಬರುತ್ತಿವೆ. ಸದ್ಯ ಈ ವಿಡಿಯೋ ಹರಿಯಾಣ ವ್ಯಾಪ್ತಿಯದ್ದು ಎಂದು ಹೇಳಲಾಗುತ್ತಿದೆ.
> ನಾಡಿನ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ!
> ಬಿಗ್ಬಾಸ್ ವಿನ್ನರ್ ಮುನಾವರ್ ಫಾರೂಖಿಯನ್ನು ಪೊಲೀಸರು ಬಂಧಿಸಿದ್ದೇಕೆ?
ಈ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆ ಇದೊಂದು ನಕಲಿ ವಿಡಿಯೋ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಹಲವಾರು ತಮ್ಮ ಗೆಳೆಯರ ಹೆಸರುಗಳನ್ನೂ ಕಾಮೆಂಟ್ ಮಾಡುತ್ತಿದ್ದಾರೆ.
> ಆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.