ಕಲಬುರಗಿ: ಹಜ್ರತ್ ಖ್ವಾಜಾ ಬಂದೇ ನವಾಜ್ ದರ್ಗಾದ ಗುರುಗಳು ಆದ ಡಾ. ಸಯ್ಯದ್ ಶಾಹ್ ಖುಸ್ರೋ ಹುಸೇನಿ ಅವರ ನಿಧನದ ಸುದ್ದಿಯು ನನ್ನಲ್ಲಿ ಅತ್ಯಂತ ನೋವುಂಟು ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ಡಾ. ಸಯ್ಯದ್ ಶಾಹ್ ಖುಸ್ರೋ ಹುಸೇನಿ ಅವರ ಅಂತಿಮ ದರ್ಶನಕ್ಕಾಗಿ ನಗರದಲ್ಲಿ ಆಗಮಿಸಿದ ಬಳಿಕ ಅವರು ಮಾತನಾಡಿದರು. ಡಾ.ಸಯ್ಯದ್ ಶಾಹ್ ಖುಸ್ರೋ ಅವರು ನಾಡಿನ ಸೂಫಿ ಪರಂಪರೆಗೆ, ಭಾವೈಕ್ಯತೆಯ ಪರಂಪರೆಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಅವರೊಂದಿಗಿನ ಒಡನಾಟವು ನನ್ನಲ್ಲಿ ಸ್ಫೂರ್ತಿ ತುಂಬುತ್ತಿತ್ತು, ಸೂಫಿ ತತ್ವಗಳಿಂದ ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವುದರ ಜೊತೆಜೊತೆಗೆ ವೈಜ್ಞಾನಿಕ ಮನೋಭಾವದಿಂದಲೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣದಿಂದ ಸಮಾಜದ ಏಳಿಗೆಗೆ ಶ್ರಮಿಸಿದ ಅವರ ಸಮಾಜಮುಖಿ ಕಾಳಜಿಯು ಸದಾ ಸ್ಮರಣಿಯವಾದದು. ಜಿಲ್ಲೆಯಲ್ಲಿ ಶರಣ ಗುಡಿಯೊಂದಿಗೆ ಬಂದೇ ನವಾಜ್ ದರ್ಗಾವನ್ನು ಬೆಸೆದು ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಅವರ ಕಾರ್ಯಗಳು ನೆನಪಿನಲ್ಲಿ ಉಳಿಯುವಂತಹದ್ದು ಎಂದರು. Priyank kharg
ಅವರ ಅಗಲಿಕೆಯಿಂದ ದುಃಖಿತನ್ನಾಗಿದ್ದೇನೆ,ಅವರ ಬಂಧುಗಳು, ಅನುಯಾಯಿಗಳ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಝ್ ಫಾತೀಮಾ, ಕುಡಾ ಅಧ್ಯಕ್ಷರಾದ ಮಜರ್ ಅಲಾಂ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಢಗೆ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ್ ಸೇರಿದಂತೆ ಹಲವರು ಇದ್ದರು.