ಬಾಲಿವುಡ್ ನಲ್ಲಿ ‘ದಡಕ್’ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ಖ್ಯಾತ ನಟಿ ದಿ. ಶ್ರೀದೇವಿ ಅವರ ಪುತ್ರಿ ಯುವ ನಟಿ ಜಾನ್ವಿ ಕಪೂರ್ ಗೆ ಸದ್ಯ ಹಲವು ಆಫರ್ ಗಳು ಮನೆಯತ್ತ ಬಂದಿವೆ. ಹೌದು, ತೆಲುಗುವಿನಲ್ಲಿ ಜೂ.ಎನ್ ಟಿಆರ್ ಜೊತೆಗೆ ‘ದೇವರ’ ಚಿತ್ರದ ಮೂಲಕ ದಕ್ಷಿಣದಲ್ಲಿ ಸಹಿ ಹಾಕಿದ ಬಳಿಕ ಹಲವು ಚಿತ್ರಗಳಲ್ಲಿ ನಟಿಸಲು ಕರೆ ಬರುತ್ತಿವೆ.
ಬಾಲಿವುಡ್ ನಲ್ಲಿ ಮೂಡು ಬರುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅನ್ಯ ಕಾರಣಗಳಿಂದಾಗಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಹಾಗಾಗಿ ಆ ಪಾತ್ರವನ್ನು ಜಾನ್ವಿ ಮಾಡಲಿದ್ದಾರೆನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಚಿತ್ರಕ್ಕೆ ಜಾನ್ವಿ ಇನ್ನು ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸದ್ಯ ದೇವರ ಚಿತ್ರದಲ್ಲಿ ನಟಿಸುತ್ತಿರುವ ಜಾನ್ವಿಗೆ ತೆಲುಗು ಸ್ಟಾರ್ ನಟ ರಾಮಚರಣ್ ಜೊತೆ ನಟಿಸಲು ಅವಕಾಶ ಸಿಕ್ಕಿದೆ. ಹೌದು, ‘ಉಪ್ಪೆನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿಗೆ ಅವಕಾಶ ನೀಡಲಾಗಿದೆ ಎಂದು ತೆಲುಗು ಚಿತ್ರರಂಗದಲ್ಲಿ ಮಾತುಕತೆಗಳು ನಡೆಯುತ್ತಿವೆ.
ಜಾನ್ವಿ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಚಿತ್ರಗಳಲ್ಲೂ ಗಮನ ಸೆಳೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಸಿನಿಮಾ ಆಫರ್ ಗಳು ಬರುತ್ತಲೇ ಇವೆ.