ಇತ್ತೀಚೆಗೆ ಪಾರ್ಟಿಯೊಂದರ ನೆಪದಲ್ಲಿ ನಟ ದರ್ಶನ್ ಸೇರಿದಂತೆ 8 ಜನರ ವಿರುದ್ಧ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈವರೆಗೆ ಇದಕ್ಕೆ ಪ್ರತಿಕ್ರಿಯಿಸದೆ ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟವೊಂದನ್ನು ಹಂಚಿಕೊಂಡು ಪರೋಕ್ಷ ಉತ್ತರ ನೀಡಿದ್ದಾರೆ.
ಹೌದು, ‘ ಚಿತ್ರದ ಯಶಸ್ಸಿನ ಹಿನ್ನೆಲೆ ಕಳೆದ ವಾರ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದರು. ಬಳಿಕ ಪಾರ್ಟಿಯಲ್ಲಿ ಕೇಕ್ ಕತ್ತರಿಸಿ, ಚಿತ್ರದ ವಿಜಯೋತ್ಸವ ಆಚರಿಸಿದರು. ನಂತರ ಇದನ್ನು ನೋಡಿ ಎಚ್ಚೆತ್ತ ಪೊಲೀಸರು ಇವರು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ನೋಟಿಸ್ ಕೊಟ್ಟಿದ್ದಾರೆ.
ಸದ್ಯ ದುಬೈನಲ್ಲಿ ಸಿನಿಮಾದ ಪ್ರಚಾರದಲ್ಲಿರುವ ದರ್ಶನ್ ಅಲ್ಲಿಂದಲೇ ಪೋಸ್ಟ್ ವೊಂದನ್ನು ಹಾಕಿ ತನಗೆ ವಿರೋಧಿಸುವವರಿಗೆ ಟಾಂಗ್ ನೀಡಿದ್ದಾರೆ.
ಆ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ.”ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು. ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ಉಲ್ಲೇಖ ಮಾಡಿದ್ದಾರೆ.