ಕಲಬುರಗಿ: ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆಸಿದೆ.
ಕೋಲಿ ಕಬ್ಬಲಿಗ ಸಮುದಾಯಕ್ಕೆ ಸೇರಿದ ಮರಲಿಂಗಪ್ಪ ತೆಳಗೇರಿ (67) ಕೊಲೆಯಾದ ದುರ್ದೈವಿಯಗೈದ್ದಾನೆಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಪುತ್ರ ಮರೆಪ್ಪ ತೆಳಗೇರಿ (28) ಜೊತೆ ಮೃತ ಮರಲಿಂಗಪ್ಪ ವಾಡಿಯಿಂದ ಚಾಮನೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಮರಲಿಂಗಪ್ಪ ಅವರ ಸೊಸೆಯ ಕುಟುಂಬ ಸಂಬಂಧಿಕರು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ತಂದೆ ಮಗ ಇಬ್ಬರೂ ಬೈಕ್ ನಿಂದ ರಸ್ತೆ ಮೇಲೆ ಬೀಳುತ್ತಿದ್ದಂತೆ ಕಾರಿನಿಂದ ಇಳಿದ ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಬೆಚ್ಚಿ ಮರೆಪ್ಪ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದು, ಇತ್ತ ಆತನ ತಂದೆ ಮರಲಿಂಗಪ್ಪನ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. Crim
ಕೆಲವು ತಿಂಗಳ ಹಿಂದೆ ಮರಲಿಂಗಪ್ಪನ ಸೊಸೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದ್ದು, ನಮ್ಮ ಮಗಳು ಇವರ ಕಿರುಕುಳಕ್ಕೆ ಬೇಸತ್ತು ಮೃತಪಟ್ಟಿದ್ದಾಳೆ ಎಂಬ ದ್ವೇಷ ಹೊತ್ತ ಕುಟುಂಬಸ್ಥರು ಈ ಕೃತ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಗಾಯಗೊಂಡ ಮರೆಪ್ಪ ಅವರನ್ನು ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಹಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಕೆ.ತಿರುಮಲೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಡಿ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಸೇರಿಸಿ ಶವ ಪರೀಕ್ಷೆ ನಡೆಸಲಾಗುತ್ತಿದೆ.
ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.