ಬಿಹಾರ ರಾಜ್ಯದ ಮಾಜಿ ಸಿಎಂ, ಜನನಾಯಕ ಎಂದೇ ಖ್ಯಾತಿ ಪಡೆದ ಕರ್ಪೂರಿ ಠಾಕೂರ್ ಅವರಿಗೆ ಈ ಬಾರಿಯ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಠಾಕೂರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಸೇವೆಯನ್ನು ಪರಿಗಣಿಸಿ, ಈ ಮಹೋನ್ನತ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಠಾಕೂರ್ ಅವರು ಡಿಸೆಂಬರ್ 1970 & ಜೂನ್ 1971ರ ನಡುವೆ 1977 ಏಪ್ರಿಲ್ 1979ರ ವರೆಗೆ ಬಿಹಾರದ ಸಿಎಂ ಆಗಿದ್ದರು. ಅಲ್ಲದೆ, ಅವರು ಎರಡು ಬಾರಿ ಉಪಮುಖ್ಯಮಂತ್ರಿಯೂ ಸಹ ಆಗಿದ್ದರು. ಠಾಕೂರ್ ಅವರು ಅಲ್ಲಿನ ಹಿಂದುಳಿದ ವರ್ಗಗಳ ಏಳಿಗೆಗೆ ಹೋರಾಟ ನಡೆಸಿದ್ದರು. ಅವರು ಸಿಎಂ ಆಗಿದ್ದಾಗ ಹಲವಾರು ಯೋಜನೆಗಳನ್ನು ಹಿಂದುಳಿದ ಜಾತಿಗಳಿಗೆ ಜಾರಿಗೊಳಿಸಿದ್ದರು.
ಠಾಕೂರ್ ಅವರನ್ನು ಈ ಬಾರಿಯ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುತ್ತಿರುವುದು ಸಂತಸವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು & ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.